ಅನು ಪ್ರಭಾಕರ್ ಪ್ರಮುಖವಾಗಿ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ನಟಿ. == ಆರಂಭಿಕ ಜೀವನ == ಅನು ಪ್ರಭಾಕರ್ ಅವರು ನವೆಂಬರ್ ೯,೧೯೮೦ರಂದು ಬೆಂಗಳೂರಿನಲ್ಲಿ ಜನಿಸಿದರು.ಇವರ ತಂದೆ ಎಂ.ವಿ.ಪ್ರಭಾಕರ್ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ನಲ್ಲಿ ಉದ್ಯೋಗಿಯಾಗಿದ್ದಾರೆ.ಇವರ ತಾಯಿ ಗಾಯತ್ರಿ ಅವರು ಡಬ್ಬಿಂಗ್ ಕಲಾವಿದೆ ಮತ್ತು ನಟಿಯಾಗಿದ್ದಾರೆ.ಇವರ ಸಹೋದರನ ಹೆಸರು ವಿಕ್ರಮ್.ಅನು ಅವರು ಬೆಂಗಳೂರಿನ ಉಪನಗರವಾದ ಮಲ್ಲೇಶ್ವರಂನಲ್ಲಿ ಬೆಳೆದರು.ಅಲ್ಲಿ ಅವರು ನಿರ್ಮಲಾ ರಾಣಿ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದರು.ಆ ಸಮಯದಲ್ಲಿ ಅವರು ಕನ್ನಡ ಚಲನಚಿತ್ರಗಳಾದ ಚಪಲ ಚೆನ್ನಿಗರಾಯ(೧೯೯೦),ಶಾಂತಿ ಕ್ರಾಂತಿ(೧೯೯೧) ಮತ್ತು ಇಂಗ್ಲಿಷ್ ಚಲನಚಿತ್ರ ಮಿಸ್ಟರೀಸ್ ಆಫ್ ದಿ ಡಾರ್ಕ್ ಜಂಗಲ್(೧೯೯೦)ಎಂಬ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.ನಂತರ ಇವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಿದರು. == ವೃತ್ತಿ ಜೀವನ == ಅನು ಅವರು ೧೯೯೯ರಲ್ಲಿ ಹೃದಯ ಹೃದಯಾ ಎಂಬ ಚಲನಚಿತ್ರದಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.ಇವರು ಸೂರಪ್ಪ,ಜಮೀನ್ದಾರ್ರು,ಹೃದಯವಂತ,ಸಾಹುಕಾರ,ವರ್ಷ ಎಂಬ ಚಲನಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೊದಿಗೆ ಅಭಿನಯಿಸಿದರು.ಇವರು ಕೆಲವು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ನಂತರ ೧೨ನೆಯ ಶತಮಾನದ ಕನ್ನಡ ಕವಿ ಅಕ್ಕಮಹಾದೇವಿಯ ಜೀವನವನ್ನು ಆಧರಿಸಿದ ಚಲನಚಿತ್ರದಲ್ಲಿ ಅನು ಅವರು ದ್ವಿಪಾತ್ರ ಪಾತ್ರವನ್ನು ವಹಿಸುತ್ತಾರೆ. == ವೈಯಕ್ತಿಕ ಜೀವನ == ಅನು ಅವರು ಮಾರ್ಚ್ ೨೦೦೨ರಲ್ಲಿ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರನ್ನು ವಿವಾಹವಾದರು.ಇವರ ನಡುವೆ ಭಿನ್ನಾಭಿಪ್ರಾಯಗಳನ್ನು ಉದಾಹರಿಸಿ, ಅನು ಅವರು ಜನವರಿ ೨೦೧೪ರಲ್ಲಿ ವಿಚ್ಛೇದನ ಪಡೆದರು.ನಂತರ ಏಪ್ರಿಲ್ ೨೦೧೬ರಲ್ಲಿ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು.ಅವರಿಗೆ ನಂದನ ಎಂಬ ಪುತ್ರಿ ಇದ್ದಾರೆ. == ಪ್ರಶಸ್ತಿಗಳು == ಅನು ಅವರ ವಿವಿಧ ಚಿತ್ರಗಳ ಅಭಿನಯಕ್ಕಾಗಿ ಬೆಂಗಳೂರಿನ ಕೊಳದ ಮಠವು 'ಅಭಿನಯ ಸರಸ್ವತಿ' ಎಂಬ ಪ್ರಶಸ್ತಿನ್ನು ನೀಡಿ ಗೌರವಿಸಲಾಯಿತು.'ಕನ್ನಡ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ೨೦೦೦-೦೧' ಮತ್ತು 'ಸಿನೆಮಾ ಎಕ್ಸ್ ಪ್ರೆಸ್ ಅತ್ಯುತ್ತಮ ನಟಿ' ಮುಂತಾದ ಪ್ರಶಸ್ತಿಗಳನ್ನು ಇವರು ಗೆದ್ದಿದ್ದಾರೆ. == ಚಲನಚಿತ್ರಗಳ ಪಟ್ಟಿ == === ಚಲನಚಿತ್ರಗಳು === == ಕಿರುತೆರೆ ಕಾರ್ಯಕ್ರಮಗಳು == ಬಾಳೆ ಬಂಗಾರ ಹೋಮ್ ಮಿನಿಸ್ಟರ್ ಶ್ರೀಮತಿ ಕರ್ನಾಟಕ ಮಂಜು ಮುಸುಕಿದ ಹಾದಿ ನೂರು ದಿನಗಳು ತ್ರಿವೇಣಿ ಸಂಗಮ == ಉಲ್ಲೇಖಗಳು ==